ಸರಕಾರಿ ಶಾಲೆಗಳಲ್ಲೂ ಪಾಲಕರ ಮನವೊಲಿಸಿ ಆನ್ಲೈನ್ ತರಗತಿ ಮಾಡುವ ಚಿಕ್ಕ ಪ್ರಯತ್ನ !!! ವಿದ್ಯಾಗಮ ಸಮಾಜದ ಕೆಳಸ್ಥರದ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ನಿಲ್ಲಿಸಿದರೂ ನಮ್ಮ 7ನೇ ತರಗತಿಯ ಮಕ್ಕಳನ್ನು ಆನ್ಲೈನ್ ತರಗತಿಗಳಿಗೆ ಪಾಲಕರ ಮನವೊಲಿಸಿ ಸಿದ್ಧಗೊಳಿಸಿ ಪ್ರತಿ ದಿನ ಸಾಯಂಕಾಲ 6-7 ಗಂಟೆಯವರೆಗೆ ವಿಜ್ಞಾನ ವಿಷಯದ ಕಲಿಯಲ್ಲಿ ತೊಡಗಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡಲಾಗುತ್ತದೆ. ಇದರಲ್ಲಿ ಪಾಲಕರನ್ನು ಮನವೊಲಿಸಿ ಅವರಲ್ಲಿ ಶಿಕ್ಷಕರ ಬಗ್ಗೆ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ನನ್ನ ಸ.ಹಿ.ಪ್ರಾ.ಶಾಲೆ, ವ್ಯಾಸನಕೆರೆಯಯ ತರಗತಿಯಲ್ಲಿ 18 ವಿದ್ಯಾರ್ಥಿಗಳ ಮದ್ಯೆ ಮೂರು ಸ್ಮಾರ್ಟ್ ಪೋನ್ ಗಳಿವೆ. ಹಾಗಾಗಿ ವಿದ್ಯಾರ್ಥಿಗಳ ಮನೆ ಸಮೀಪವಿರುವಂತೆ ಮೂರು ಗುಂಪು ಮಾಡಿ ಕಲಿಕೆಯಲ್ಲಿ ತೋಡಗಿಸಲು ಪ್ರಯತ್ನ ಮಾಡುಲಾಗುತ್ತಿದೆ.
ಇಂದಿನ ದಿನಗಳಲ್ಲಿ....ಅತೀ ಅವಶ್ಯಕವಾಗಿರುವ ವಿಚಾರ....ವಿದ್ಯಾರ್ಥಿಗಳಿಗೆ ...ಮಾರ್ಗದರ್ಶನ ಮಾಡಿದ ಶಿಕ್ಷಕರಿಗೆ ಅಭಿನಂದನೆಗಳು
ReplyDeleteThank you for your valuable words sir.
Delete